ಮಂಗಳೂರು, ಸೆ.20 : ದ.ಕ. ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ದರ ಕಡಿಮೆಯಾಗುತ್ತಲೇ ಶಾಲೆಗಳ ಭೌತಿಕ ತರಗತಿ ಆರಂಭಿಸಲು ಮುಂದಾದ ಜಿಲ್ಲಾಡಳಿತಕ್ಕೆ ವಿದ್ಯಾರ್ಥಿಗಳು ಮತ್ತು ಹೆತ್ತವರು/ಪೋಷಕರಿಂದ ಸಕಾರಾತ್ಮಕ ಸ್ಪಂದನ ವ್ಯಕ್ತವಾಗಿದೆ. ಸೆ.20ರಿಂದ 6 ಮತ್ತು 7ನೆ ತರಗತಿಗಳು ಆರಂಭವಾಗಲಿದೆ. ಅದಕ್ಕಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ, ಶಿಕ್ಷಕ ವೃಂದ, ಎಸ್ಡಿಎಂಸಿ ಸಮಿತಿ, ಖಾಸಗಿ ಶಾಲೆಗಳ ಆಡಳಿ ಮಂಡಳಿಯು ಸಂಪೂರ್ಣ ಸಜ್ಜಾಗಿದೆ. ಸೆ.20ರಂದು ದ.ಕ. ಜಿಲ್ಲೆಯಲ್ಲಿ 6 ಮತ್ತು 7ನೆ ತರಗತಿಯು ಬೆಳಗ್ಗೆ ನಡೆಯಲಿದೆ.