ಜೈಪುರ : ಇತ್ತೀಚೆಗೆ ಗೋಹತ್ಯೆದ ಬಗ್ಗೆ ದೇಶದಾದ್ಯಂತ ಬಾರೀ ಚರ್ಚೆಗಳು ನಡೆಯುತ್ತಿದ್ದು, ಅನೇಕ ರಾಜಕೀಯ ನಾಯಕರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ರಾಜಸ್ಥಾನ ಬಿಜೆಪಿ ಶಾಸಕ ಗ್ಯಾನ್ ದೇವ್ ಅಹುಜಾ ಈ ಬಗ್ಗೆ ಮಾತನಾಡಿ 'ಗೋಹತ್ಯೆ ಮಾಡುವುದು ಭಯೋತ್ಪಾದನೆಗಿಂತ ದೊಡ್ಡ ಅಪರಾಧ' ಎಂದು ಹೇಳಿದ್ದಾರೆ.