ಬೆಂಗಳೂರು : ಸಕ್ರಿಯ ರಾಜಕಾರಣಕ್ಕೆ ಬರಲ್ಲ ಎಂದು ನಟಿ, ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಅವರು ತಿಳಿಸಿದ್ದಾರೆ. ಖಾಸಗಿ ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ ರಮ್ಯಾ ಅವರು, ಸಕ್ರಿಯ ರಾಜಕಾರಣಕ್ಕೆ ಬರುವ ಉದ್ದೇಶವಿಲ್ಲ. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶ ಹೊಂದಿಲ್ಲ. ಸೋಶಿಯಲ್ ಮೀಡಿಯಾದ ಜವಾಬ್ದಾರಿ ಖುಷಿ ತಂದಿದೆ. ನನಗೆ ನೀಡಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದೇನೆ. ನನಗೆ ರಾಜಕೀಯಕ್ಕಿಂತ ಸಂಘಟನಾತ್ಮಕ ಕೆಲಸ ಖುಷಿ ತಂದಿದೆ. ಕರ್ನಾಟಕದ ಚುನಾವಣೆಯಲ್ಲೂ ಸೋಶಿಯಲ್ ಮೀಡಿಯಾದ ಜವಾಬ್ದಾರಿಹೊತ್ತಿದ್ದೇನೆ ಎಂದು