ಚೆನ್ನೈ: ತಮಿಳುನಾಡು ಮಾಜಿ ಸಿಎಂ ಎಂ ಕರುಣಾನಿಧಿ ಸಾವನ್ನಪ್ಪಿದ ಬೆನ್ನಲ್ಲೇ ಅವರ ಉತ್ತರಾಧಿಕಾರಿ ಯಾರು ಎಂಬ ಬಗ್ಗೆ ಈಗ ಪುತ್ರರಲ್ಲೇ ಕಿತ್ತಾಟ ನಡೆದಿದೆ ಎನ್ನಲಾಗಿದೆ.ಕರುಣಾನಿಧಿ ಬದುಕಿದ್ದಾಗ ಸ್ಟಾಲಿನ್ ಅವರೇ ತಮ್ಮ ಉತ್ತರಾಧಿಕಾರಿ ಎಂದು ಬಿಂಬಿಸಿದ್ದರು. ಆದರೆ ಇನ್ನೊಬ್ಬ ಪುತ್ರ ಎಂಕೆ ಅಳಗಿರಿ ಕೂಡಾ ಡಿಎಂಕೆ ಪರಮೋಚ್ಛ ನಾಯಕ ತಾನಾಗಬೇಕು ಎಂದು ಆಗ್ರಹಿಸುತ್ತಿದ್ದಾರೆ.ಇದರಿಂದಾಗಿ ಇದೀಗ ಡಿಎಂಕೆ ಧುರೀಣನ ಸ್ಥಾನಕ್ಕೆ ಸಹೋದರರಿಬ್ಬರಲ್ಲೇ ಕಲಹ ಶುರುವಾಗಿದೆ ಎನ್ನಲಾಗಿದೆ. ಹಿಂದೆ ಜಯಲಲಿತಾ ತೀರಿಕೊಂಡಾಗಲೂ ಎಐಎಡಿಎಂಕೆಯಲ್ಲೂ ಇದೇ