ಮಂಗಳೂರು: ನಿನ್ನೆ ದಿನವಿಡೀ ಮಳೆ ಸುರಿದು ಮಂಗಳೂರಿನ ಬೀದಿಗಳನ್ನು ಕಡಲಾಗಿ ಮಾಡಿದ್ದ ವರುಣರಾಯ ಇಂದು ಮತ್ತೆ ಬೆಳಗ್ಗಿನಿಂದಲೇ ಸುರಿಯಲು ಶುರು ಮಾಡಿದ್ದಾನೆ.ಬೆಳಗ್ಗಿನ ಜಾವ ಬಿಡುವು ತೋರಿದ್ದ ಮಳೆ, ಬೆಳಿಗ್ಗೆ ಮತ್ತೆ ಸುರಿಯಲು ಆರಂಭಿಸಿದೆ. ಇಂದೂ ಕೂಡಾ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಈ ಮೊದಲೇ ಮುನ್ಸೂಚನೆ ನೀಡಿತ್ತು.ಮುನ್ನಚ್ಚರಿಕೆಯ ಕ್ರಮವಾಗಿ ಇಂದು ದಕ್ಷಿಣ ಕನ್ನಡದಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಎನ್ ಡಿಆರ್ ಎಫ್ ಸಿಬ್ಬಂದಿ ಸೇರಿದಂತೆ ಸ್ಥಳೀಯ ಸಂಘ