ಬೆಂಗಳೂರು : 2030ರೊಳಗೆ ರಾಜ್ಯದ ಎಲ್ಲ ಬಸ್ಗಳನ್ನು ಎಲೆಕ್ಟ್ರಿಕ್ ಬಸ್ ಮಾಡುವ ಗುರಿ ಇದೆ ಎಂದು ಸಚಿವ ಶ್ರೀರಾಮುಲು ಘೋಷಣೆ ಮಾಡಿದ್ದಾರೆ.ಇಂದಿನ ವಿಧಾನಸಭಾ ಕಲಾಪದಲ್ಲಿ ಈಕೋ ಸಿಸ್ಟಮ್ ತರಲು ಸಮಿತಿ ಮಾಡಲಾಗಿತ್ತು. ಎಲೆಕ್ಟ್ರಿಕ್ ಬಸ್ ಬಳಕೆ ಕಡಿಮೆಯಾಗ್ತಿದೆ ಅಂತಾ ಶಾಸಕ ತನ್ವೀರ್ ಸೇಠ್ ಪ್ರಶ್ನೆ ಮಾಡಿದರು.ಇದಕ್ಕೆ ಉತ್ತರಿಸಿದ ರಾಮುಲು, ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿ ಅಡಿ 90ಎಲೆಕ್ಟ್ರಿಕ್ ಬಸ್ ಕಾಂಟ್ರಾಕ್ಟ್ ಗೆ ಪಡೆಯಲಾಗಿದೆ. ಇದು 12ವರ್ಷ ಕಾಂಟ್ರಾಕ್ಟ್ ಇರಲಿದೆ.