ನವದೆಹಲಿ : ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸುವಂತೆ ವಾಯುಪಡೆಗೆ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ ಎಂದು ಅಧಿಕೃತ ಮೂಲ ಹೇಳಿದೆ. ವಾಯುಪಡೆಯ ಸಾಮಥ್ರ್ಯವನ್ನು ಸಹಾಯ ಪಡೆದುಕೊಂಡು ಕಡಿಮೆ ಸಮಯದಲ್ಲಿ ಹೆಚ್ಚಿನ ಜನರನ್ನು ಸ್ಥಳಾಂತರಿಸಬಹುದು. ಇದು ಇದರಿಂದ ಹೆಚ್ಚು ಜನರನ್ನು ಕರೆಸಿಕೊಳ್ಳಲು ಸಹಾಯವಾಗುತ್ತದೆ ಎಂದು ತಿಳಿಸಿದೆ.ಭಾರತದ ವಾಯುಪಡೆಯು ಸಿ-17 ಗ್ಲೋಬ್ಮಾಸ್ಟರ್ ವಿಮಾನವನ್ನು ಆಪರೇಷನ್ ಗಂಗಾದ ಭಾಗವಾಗಿ ಅಳವಡಿಸುವ ನಿರೀಕ್ಷೆಯಿದೆ. ಇಂದು ಬೆಳಗ್ಗೆ 182 ಭಾರತೀಯರನ್ನು ಹೊತ್ತ ವಿಮಾನವೊಂದು ಮುಂಬೈಗೆ ಬಂದಿಳಿದಿದೆ.