ದುಬೈ : ಏರ್ ಇಂಡಿಯಾ ಸಂಸ್ಥೆಯನ್ನು ಕುರಿತಂತೆ ಕೇಂದ್ರ ಸರ್ಕಾರ ಇನ್ನೂ ಯಾವುದೇ ತೀರ್ಮಾನವನ್ನು ಕೈಗೊಂಡಿಲ್ಲ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಶ್ ಗೋಯಲ್ ಶನಿವಾರ ಇಲ್ಲಿ ಹೇಳಿದರು. ವ್ಯವಸ್ಥಿತವಾಗಿ ನಿಯಮಾನುಸಾರ ಬಿಡ್ನ ಅಂತಿಮ ವಿಜೇತರನ್ನು ಆಯ್ಕೆ ಮಾಡಲಾಗುವುದು ಎಂದು ಹೇಳಿದರು. ನಾನು ದುಬೈನಲ್ಲಿದ್ದೇನೆ. ಯಾವುದೇ ತೀರ್ಮಾನ ಕೈಗೊಂಡ ಮಾಹಿತಿ ನನ್ನಲ್ಲಿಲ್ಲ. ಬಿಡ್ ಆಹ್ವಾನಿಸಿರುವುದು ನಿಜ. ಅದನ್ನು ನಿಗದಿತ ವೇಳೆಗೆ ಅಧಿಕಾರಿಗಳು ಗಮನಿಸುತ್ತಾರೆ. ನಿಯಮದಂತೆಯೇ ಎಲ್ಲವೂ ನಡೆಯಲಿದೆ ಎಂದು