ಬೆಂಗಳೂರು : ಗ್ಯಾರಂಟಿ ಯೋಜನೆಗಳ ಪರಿಣಾಮವಾಗಿ ಮದ್ಯದ ಬೆಲೆ ಏರಿಸಿ ಬಿಸಿ ಮುಟ್ಟಿಸಿದ್ದ ಸರ್ಕಾರಕ್ಕೆ ಈಗ ಮದ್ಯಪ್ರಿಯರೇ ಶಾಕ್ ಕೊಟ್ಟಿದ್ದಾರೆ. ನಿರಂತರ ಬೆಲೆ ಏರಿಕೆಯಿಂದ ಮದ್ಯಪ್ರಿಯರು ಎಣ್ಣೆ ಖರೀದಿಸಲು ನಿರಾಸಕ್ತಿ ತೋರಿದ್ದಾರೆ. ಇದರಿಂದಾಗಿ ಮದ್ಯ ಮಾರಾಟದಲ್ಲಿ ಗಣನೀಯ ಇಳಿಕೆಯಾಗಿದೆ. ಭಾರತೀಯ ಮದ್ಯ ಮಾರಾಟ ಪ್ರಮಾಣ ಶೇ.15 ರಷ್ಟು ಕುಸಿತ ಕಂಡಿದೆ. ಆದರೆ ಬಿಯರ್ ಮಾರಾಟದಲ್ಲಿ ಅಂತಹ ವ್ಯತ್ಯಯ ಕಂಡುಬಂದಿಲ್ಲ. ರಾಜ್ಯ ಪಾನೀಯ ನಿಗಮಕ್ಕೆ ಲಿಕ್ಕರ್ಗೆ ಸಲ್ಲಿಸುವ ಖರೀದಿ ಬೇಡಿಕೆ ಇಳಿಕೆಯಾಗಿದೆ.