ಬೆಂಗಳೂರು: ಬೆಳಗಾವಿ ಕಾಂಗ್ರೆಸ್ ನ ಬಂಡಾಯದ ಲಾಭ ಪಡೆಯಲು ಯತ್ನಿಸಿ ಕೈಸುಟ್ಟುಕೊಂಡ ರಾಜ್ಯ ಬಿಜೆಪಿ ನಾಯಕರು ತಮ್ಮ ರಾಷ್ಟ್ರೀಯ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.ಸರ್ಕಾರ ಉರುಳಿಸುವ ಪ್ರಯತ್ನ ಮಾಡಬೇಡಿ ಎಂದು ಸೂಚಿಸಿದರೂ ತೆರೆಮರೆಯಲ್ಲೇ ಆಪರೇಷನ್ ಕಮಲ ಮಾಡಲು ಹೋಗಿ ಕೈ ಸುಟ್ಟುಕೊಂಡ ರಾಜ್ಯ ನಾಯಕರ ಮೇಲೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಗರಂ ಆಗಿದ್ದಾರೆ ಎನ್ನಲಾಗಿದೆ.ಆಪರೇಷನ್ ಕಮಲ ಮಾಡಿ, ಸರ್ಕಾರ ಉರುಳಿಸಿ ಪಕ್ಷಕ್ಕೆ ಮುಜುಗರ, ಕೆಟ್ಟ ಹೆಸರು ತಂದುಕೊಂಡು ಇಮೇಜ್ ಕಳೆದುಕೊಳ್ಳಬೇಡಿ.