ಕಳೆದ ಏಪ್ರಿಲ್, ಮೇನಲ್ಲಿ ಕೊರೊನಾ ಎರಡನೇ ಅಲೆಯಿಂದ ತತ್ತರಿಸಿದ ಆತಂಕವು ಮಾಸವು ಮುನ್ನವೇ ರಾಜಧಾನಿ ಬೆಂಗಳೂರು ನಗರವನ್ನು ಮತ್ತೊಂದು ಕೊರೊನಾ ಅಲೆಯ ಭೀತಿ ನಿಧಾನವಾಗಿ ಆವರಿಸಲು ಆರಂಭವಾದಂತೆ ಕಾಣುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಕಳೆದ ಐದು ದಿನಗಳಲ್ಲಿ ಸುಮಾರು 250 ಮಕ್ಕಳಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಪತ್ತೆಯಾಗಿವೆ. ಇದರಿಂದ ಎಚ್ಚೆತ್ತಿರುವ ರಾಜ್ಯ ಸರ್ಕಾರವು ಕೂಡಲೇ ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ ಅಗತ್ಯ ತುರ್ತು ಸೌಲಭ್ಯಗಳನ್ನು ನಗರದ ಎಲ್ಲ ಆಸ್ಪತ್ರೆಗಳಲ್ಲಿ ಸಿದ್ಧವಾಗಿರಿಸಲು ಖಡಕ್