ಆಂಧ್ರ ಪ್ರದೇಶ : ಆಂಧ್ರ ಪ್ರದೇಶದ ಎಲ್ಲಾ 24 ಸಚಿವರು ರಾಜೀನಾಮೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ. ಸಂಪುಟ ಪುನಾರಚನೆ ಕಾರಣದಿಂದ ಹಾಲಿ ಸಚಿವರು ರಾಜೀನಾಮೆ ಸಲ್ಲಿಸಿದ್ದಾರೆ. ನೂತನ ಸಚಿವರು ಏಪ್ರಿಲ್ 11 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕರ್ನಾಟಕದಲ್ಲಿ ಸಂಪುಟ ವಿಸ್ತರಣೆ ಚರ್ಚೆಗಳು ಜೋರಾಗುತ್ತಿರುವ ಬೆನ್ನಲ್ಲೇ ಅತ್ತ ಆಂಧ್ರ ಪ್ರದೇಶದಲ್ಲಿ ಸಂಪುಟ ಪುನಾರಚನೆ ಕಸತ್ತು ಶುರುವಾಗಿದೆ. ಹೀಗಾಗಿ ಹಾಲಿ ಸಚಿವರು ರಾಜೀನಾಮೆ