ನವದೆಹಲಿ : ಭಾರತದಲ್ಲಿ ಕೊರೊನಾ ರೂಪಾಂತರಿ ಓಮಿಕ್ರಾನ್ ಉಪತಳಿ BA.4 ಮತ್ತು BA.5 ತಳಿ ಪತ್ತೆಯಾಗಿದೆ. ತಮಿಳುನಾಡು ಮತ್ತು ತೆಲಂಗಾಣದಲ್ಲಿ ಕೊರೊನಾ ಹೊಸ ತಳಿಗಳು ದೃಢಪಟ್ಟಿವೆ. ಈ ಕುರಿತು INSACOG ಅಧಿಕೃತ ಪ್ರಕಟಣೆ ಹೊರಡಿಸಿದೆ. ತಮಿಳುನಾಡು ಮೂಲದ 19 ವರ್ಷದ ಯುವತಿಯಲ್ಲಿ ಕೊರೊನಾ ರೂಪಾಂತರಿ BA.4 ದೃಢಪಟ್ಟಿದೆ. ತೆಲಂಗಾಣ ಮೂಲದ 80 ವರ್ಷದ ವೃದ್ಧನಲ್ಲಿ BA.5 ಉಪತಳಿ ಪತ್ತೆಯಾಗಿದೆ.ಇಬ್ಬರು ಸೋಂಕಿತರಲ್ಲಿ ಕೊರೊನಾ ಲಘು ಲಕ್ಷಣಗಳು ವರದಿಯಾಗಿದೆ. BA.4 ಮತ್ತು