ಹಾವೇರಿ : ಮೊನ್ನೆ ನಡೆದ ಭಾರತೀಯ ಸೇನೆಯ ಮುಖ್ಯಸ್ಥರ ಅವಘಡದಂತೆ ಸಂಕ್ರಾತಿಯೊಳಗೆ ಮತ್ತೊಂದು ರಾಜಕೀಯ ಅವಘಡ ಸಂಭವಿಸುವ ಲಕ್ಷಣವಿದೆ.ಇದರಿಂದ ಜಗತ್ತು ತಲ್ಲಣಗೊಳ್ಳಲಿದೆ ಎಂದು ಕೋಡಿ ಮಠದ ಶಿವಾನಂದ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ರಾಣೇಬೆನ್ನೂರು ನಗರದ ಕಾರ್ಯಕ್ರಮವೊಂದರ ನಿಮಿತ್ತ ಆಗಮಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀಗಳು, ನಾನು ಈ ಹಿಂದೆಯೇ ದೊಡ್ಡಮಟ್ಟದ ಅವಘಡ ಸಂಭವಿಸುವ ಕುರಿತು ಹೇಳಿದ್ದೆ.ಕೊರೊನಾ ರೂಪಾಂತರಿ ಹೆಚ್ಚಾಗುವ ಎಲ್ಲಾ ಲಕ್ಷಣಗಳಿವೆ. ದೇಶದಲ್ಲಿ ಸಂಶಯ, ಅಸಹನೆ, ದ್ವೇಷ ಹಾಗೂ ರಾಜಕೀಯ ಕಲಹಗಳು