ಕೇಪ್ ಕನವರಾಲ್: ಇರುವೆಗಳು, ಬೆಣ್ಣೆಹಣ್ಣು, ನಿಂಬೆಹಣ್ಣು, ಐಸ್ಕ್ರೀಂ ಸೇರಿದಂತೆ ಹಲವು ವಸ್ತುಗಳನ್ನು ಹೊತ್ತ ಸ್ಪೇಸ್ ಎಕ್ಸ್ನ ರಾಕೆಟ್ವೊಂದು ರವಿವಾರ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದತ್ತ ಸಂಚಾರ ಆರಂಭಿಸಿದೆ. ಸೋಮವಾರ ಇದು ನಿಲ್ದಾಣವನ್ನು ತಲುಪಲಿದ್ದು, ಕಳೆದ 10 ವರ್ಷಗಳಲ್ಲಿ ನಾಸಾಗೆ ಸ್ಪೇಸ್ ಎಕ್ಸ್ ಕಂಪೆನಿ ಮಾಡುತ್ತಿರುವ 23ನೇ ಡೆಲಿವರಿ ಇದಾಗಿದೆ. ನಾಸಾದ ಕೆನೆಡಿ ಬಾಹ್ಯಾಕಾಶ ಕೇಂದ್ರದಿಂದ ರವಿವಾರ ಬೆಳಗ್ಗೆ ಮರುನವೀಕರಣಗೊಂಡ ಫಾಲ್ಕನ್ ರಾಕೆಟ್ ನಭಕ್ಕೆ ಚಿಮ್ಮಿತು. ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿರುವ 7 ಮಂದಿ