ಅನ್ಯಗ್ರಹದಿಂದ ಬಂದಿವೆಯೇ ʼಪೆಂಗ್ವಿನ್ʼ ಗಳು..? ಅಧ್ಯಯನದ ವರದಿ ಬಳಿಕ ಶುರುವಾಗಿದೆ ಹೀಗೊಂದು ಚರ್ಚೆ

ದೆಹಲಿ| Ramya kosira| Last Modified ಮಂಗಳವಾರ, 14 ಸೆಪ್ಟಂಬರ್ 2021 (14:42 IST)
ಹಾರಾಟವನ್ನೇ ಮಾಡಲಾಗದೇ ಇದ್ದರೂ ಪಕ್ಷಿಗಳ ಜಾತಿಯಲ್ಲೇ ಸ್ಥಾನ ಪಡೆದಿರುವ ಪೆಂಗ್ವಿನ್ಗಳು ಸೃಷ್ಟಿಯ ಕೌತುಕಗಳಲ್ಲಿ ಒಂದು ಎಂದು ಹೇಳಿದರೆ ತಪ್ಪಾಗಲಾರದು. ಸದಾ ಗುಂಪಿನಲ್ಲೇ ಇರುವ ಕಪ್ಪು ಹಾಗೂ ಬಿಳಿ ಬಣ್ಣದ ಪೆಂಗ್ವಿನ್ಗಳು ನೋಡೋಕೆ ತುಂಬಾನೆ ಮುದ್ದಾಗಿ ಇರುತ್ತವೆ. ಈ ಮುದ್ದಾದ ಪಕ್ಷಿಗಳ ಬಗ್ಗೆ ವಿಜ್ಞಾನಿಗಳು ಒಂದು ಶಾಕಿಂಗ್ ಮಾಹಿತಿಯನ್ನು ಬಯಲು ಮಾಡಿದ್ದಾರೆ.

ಹೌದು..! ಪೆಂಗ್ವಿನ್ಗಳ ಮಲದಲ್ಲಿ ವಿಚಿತ್ರವಾದ ರಾಸಾಯನಿಕವೊಂದು ಪತ್ತೆಯಾಗಿದ್ದು ಇದನ್ನು ನೋಡಿದ ವಿಜ್ಞಾನಿಗಳು ಪೆಂಗ್ವಿನ್ಗಳು ಅನ್ಯಗ್ರಹದ ಜೀವಿಗಳಿರಬಹುದೇ ಎಂದು ಶಂಕಿಸುವಂತಾಗಿದೆ. ಏಕೆಂದರೆ ಶುಕ್ರ ಗ್ರಹದಲ್ಲಿ ಕಂಡು ಬರುವ ರಾಸಾಯನಿಕವೊಂದು ಪೆಂಗ್ವಿನ್ಗಳ ಮಲದಲ್ಲಿ ಪತ್ತೆಯಾಗಿದೆ..!
ಬ್ರಿಟನ್ ಸಂಶೋಧಕರ ಅಧ್ಯಯನದ ಪ್ರಕಾರ ಪೆಂಗ್ವಿನ್ನ ಮಲದಲ್ಲಿ ಫಾಸ್ಪೈನ್ ಎಂಬ ರಾಸಾಯನಿಕ ಅಂಶ ಪತ್ತೆಯಾಗಿದೆ ಎನ್ನಲಾಗಿದೆ. ಇದಾದ ಬಳಿಕ ಪೆಂಗ್ವಿನ್ ಮೂಲ ಯಾವುದು ಎಂಬ ಚರ್ಚೆ ವಿಜ್ಞಾನ ಲೋಕದಲ್ಲಿ ಶುರುವಾಗಿದೆ. ಏಕೆಂದರೆ 38 ಮಿಲಿಯನ್ ಮೈಲಿ ದೂರದಲ್ಲಿರುವ ಶುಕ್ರ ಗ್ರಹದಲ್ಲಿ ಕಾಣಸಿಗುವ ಫಾಸ್ಪೈನ್ ಭೂಮಿಯಲ್ಲಿರುವ ಜೀವಿಯಲ್ಲಿ ಕಾಣಿಸಿಕೊಳ್ಳಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಮೂಡಿದೆ.
ಈ ರಾಸಾಯನಿಕದ ಬಗ್ಗೆ ಹೆಚ್ಚಿನ ನಡೆಸುವ ಸಲುವಾಗಿ ವಿಜ್ಞಾನಿಗಳು ಫಾಕ್ಲ್ಯಾಂಡ್ ದ್ವೀಪಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಜೆಂಟೂ ಪೆಂಗ್ವಿನ್ಗಳ ಜೀವನ ಶೈಲಿಯ ಬಗ್ಗೆ ಕಣ್ಣಿಟ್ಟಿದ್ದಾರೆ.
 
ಇದರಲ್ಲಿ ಇನ್ನಷ್ಟು ಓದಿ :