ಲಂಡನ್ : ದೇಶದ ಬ್ಯಾಂಕ್ ಗಳಿಂದ ಸಾಲಪಡೆದು ಮರುಪಾವತಿಸದೆ ವಂಚನೆ ಮಾಡಿ ದೇಶ ಬಿಟ್ಟು ಪರಾರಿಯಾದ ಮದ್ಯದ ದೊರೆ ವಿಜಯ್ ಮಲ್ಯ ಈಗ ಸ್ಪೋಟಕ ಮಾಹಿತಿಯೊಂದನ್ನು ಹೊರಹಾಕಿದ್ದಾರೆ. ಭಾರತಕ್ಕೆ ಮಲ್ಯರನ್ನು ಹಸ್ತಾಂತರ ಮಾಡುವ ಕುರಿತು ಲಂಡನ್ ನ್ಯಾಯಾಲಯದಲ್ಲಿ ನಡೆದ ಪ್ರಕರಣದ ವಿಚಾರಣೆಗೆ ಹಾಜರಾಗುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯ್ ಮಲ್ಯ, ತಾನು ಭಾರತವನ್ನು ತೊರೆಯುವ ಮುನ್ನ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿ ಬ್ಯಾಂಕ್ಗಳಿಗೆ ನೀಡಬೇಕಿದ್ದ