ನವದೆಹಲಿ : ಯುದ್ಧ ಪೀಡಿತ ಉಕ್ರೇನಿನಿಂದ ವಿದ್ಯಾಭ್ಯಾಸವನ್ನು ಅರ್ಧಕ್ಕೇ ಮೊಟಕುಗೊಳಿಸಿ ಭಾರತಕ್ಕೆ ಸ್ಥಳಾಂತರಗೊಂಡಿರುವ ವಿದ್ಯಾರ್ಥಿಗಳ ಶಿಕ್ಷಣವನ್ನು ಮುಂದುವರೆಸಲು, ನೆರವು ನೀಡುವಂತೆ ಹಂಗೇರಿ, ರೊಮೇನಿಯಾ, ಕಜಕಿಸ್ತಾನ ಮತ್ತು ಪೋಲೆಂಡ್ ಬಳಿ ಭಾರತ ಮಾತುಕತೆ ನಡೆಸುತ್ತಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಬುಧವಾರ ತಿಳಿಸಿದ್ದಾರೆ.ಲೋಕಸಭೆಯಲ್ಲಿ ಉಕ್ರೇನ್ ಪರಿಸ್ಥಿತಿ ಕುರಿತ ಚರ್ಚೆ ವೇಳೆ ಮಾತನಾಡಿದ ಅವರು ‘ಉಕ್ರೇನಿಂದ ಸ್ಥಳಾಂತರಗೊಂಡ ವೈದ್ಯ ವಿದ್ಯಾರ್ಥಿಗಳು ಹಂಗೇರಿ ವಿಶ್ವವಿದ್ಯಾಲಯಗಳಲ್ಲಿ ಕೋರ್ಸ್ ಪೂರ್ಣಗೊಳಿಸಲು ಆ ದೇಶವು ಅನುಮತಿ ನೀಡಿದೆ.ಬೇರೆ ದೇಶಗಳೂ