ಹಾಸನ : ಹೆದ್ದಾರಿ ಕಾಮಗಾರಿ ನಡೆಸುವ ಸಲುವಾರಿ ಶಿರಾಡಿ ರಸ್ತೆಯನ್ನು ಸುಮಾರು ನಾಲ್ಕು ತಿಂಗಳುಗಳ ಕಾಲ ಬಂದ್ ಮಾಡುವ ವಿಚಾರವಾಗಿ ಮತ್ತೆ ಚರ್ಚೆ ಶುರುವಾಗಿದೆ.ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ, ದೋಣಿಗಾಲ್ ನಿಂದ ಮಾರನಹಳ್ಳಿವರೆಗೆ ಸುಮಾರು 14 ಕಿಲೋಮೀಟರ್ ದೂರ ಶಿರಾಡಿ ಹೆದ್ದಾರಿ ಬಂದ್ ಮಾಡಿ, ಕಾಮಗಾರಿ ನಡೆಸಲು ಗುತ್ತಿಗೆದಾರರು ಮನವಿ ಮಾಡಿದ್ದಾರೆ ಎನ್ನಲಾಗಿದೆ.ಬೆಂಗಳೂರಿನಿಂದ ಮಂಗಳೂರು, ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳ ಸೇರಿದಂತೆ ಇನ್ನಿತರ ಸ್ಥಳಗಳಿಗೆ ಹೋಗಲು ಶಿರಾಡಿಘಾಟ್ ರಸ್ತೆಯೇ ಮುಖ್ಯ