ಬೆಂಗಳೂರು : ನಟ ಪ್ರಕಾಶ್ ರೈ ಮೇಲೆ ಚಿತ್ರದುರ್ಗದ ಹಿರಿಯೂರು ತಾಲೂಕಿನ ಬಂಡ್ಲರಹಟ್ಟಿ ಗ್ರಾಮದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರಣ ನಟ ಪ್ರಕಾಶ್ ರೈ ಇದೇ ಜನವರಿಯಲ್ಲಿ ಬಂಡ್ಲರಹಟ್ಟಿ ಗ್ರಾಮವನ್ನು ದತ್ತು ಪಡೆದುಕೊಂಡು ಅಭಿವೃದ್ಧಿ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಇದೀಗ ಗ್ರಾಮದಲ್ಲಿ ನೀರಿನ ಸಮಸ್ಯೆ ಉಂಟಾಗಿ ಅಶುದ್ಧ ನೀರು ಕುಡಿದು ಜನರು ಖಾಯಿಲೆಯಿಂದ ಬಳಲುತ್ತಿದ್ದಾರೆ. ಗ್ರಾಮಸ್ಥರು ಇಷ್ಟೆಲ್ಲಾ ತೊಂದರೆ ಅನುಭವಿಸುತ್ತಿದ್ದರು ಪ್ರಕಾಶ್ ರೈ ಮಾತ್ರ ಇಂದಿಗೂ ಗ್ರಾಮಕ್ಕೆ ಭೇಟಿಯೇ