ಬೆಂಗಳೂರು: ಟಿಬೆಟಿಯನ್ ಧರ್ಮಗುರು ದಲೈಲಾಮಾ ಹತ್ಯೆ ಸಂಚು ಮಾಡುತ್ತಿದ್ದ ಜೆಎಂಬಿ ಉಗ್ರರನ್ನು ಬಂಧಿಸಿ ಎನ್ ಐಎ ತನಿಖೆ ನಡೆಸುವಾಗ ಮತ್ತಷ್ಟು ಭಯಾನಕ ಸತ್ಯಗಳು ಹೊರಬಿದ್ದಿವೆ.ಉಗ್ರ ಮುನೀರ್ ಸೇರಿದಂತೆ ನಾಲ್ವರು ಉಗ್ರರು ರಾಮನಗರದಲ್ಲಿ ವಾಸ್ತವ್ಯ ಹೂಡಿ ಅಲ್ಲಿಂದಲೇ ದಲೈಲಾಮಾ ಹತ್ಯೆಗೆ ಸಂಚು ರೂಪಿಸುತ್ತಿದ್ದರು. ಇವರನ್ನು ವಿಚಾರಿಸಿದಾಗ ಇನ್ನೂ ಐದರಿಂದ ಆರು ಉಗ್ರರು ರಾಜ್ಯ ರಾಜಧಾನಿ ಸುತ್ತಮುತ್ತ ಓಡಾಡುತ್ತಿರುವ ಸಂಗತಿ ಬಹಿರಂಗವಾಗಿದೆ.ಹೀಗಾಗಿ ಆ ಉಗ್ರರಿಗಾಗಿ ಹುಡುಕಾಟ ನಡೆದಿದೆ. ಅಕ್ರಮ ವಲಸಿಗರಿಗೆ, ಉಗ್ರರಿಗೆ ಇತ್ತೀಚೆಗೆ