ನವದೆಹಲಿ: ಆಂಟಿಬಯೋಟಿಕೆ ಔಷಧಗಳು ಇನ್ನು ಉಪಯೋಗವಿಲ್ಲ ಎಂದು ಸಿಕ್ಕ ಸಿಕ್ಕಲ್ಲಿ ಎಸೆಯುತ್ತಿದ್ದೀರಾ? ಹಾಗಿದ್ದರೆ ಈ ಶಾಕಿಂಗ್ ಸುದ್ದಿಯನ್ನು ನೀವು ಓದಲೇಬೇಕು.ದೆಹಲಿಯ ಏಮ್ಸ್ ವೈದ್ಯರ ಸಂಶೋಧನಾ ಸಮಿತಿಯೊಂದು ಈ ಬಿಸಾಕಿದ ಔಷಧಗಳ ಬಗ್ಗೆ ಆಘಾತಕಾರಿ ಅಂಶ ಕಂಡುಕೊಂಡಿದೆ. ಇಂತಹ ಹಲವು ಆಂಟಿಬಯೋಟಿಕ್ ಔಷಧಗಳು ಯುಮುನಾ ನದಿಯಲ್ಲಿ ತೇಲಿಬರುತ್ತಿದ್ದು, ಇದನ್ನೇ ತರಕಾರಿ, ಹಣ್ಣು ಬೆಳೆಗೆ ಬಳಸಲಾಗುತ್ತಿದೆ. ಇದು ಆಹಾರದ ರೂಪದಲ್ಲಿ ವಿಷಕಾರಿಯಾಗಿ ಮತ್ತೆ ನಮ್ಮ ಹೊಟ್ಟೆ ಸೇರುತ್ತಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.ಕೇವಲ ಯಮುನಾ