ಬೀಜಿಂಗ್ : ಚೀನಾದಲ್ಲಿ ಕೊರೊನಾ ಆರ್ಭಟ ಮುಂದುವರಿಯುತ್ತಿದ್ದು, 26 ಮಿಲಿಯನ್ ಜನರಿರುವ ಶಾಂಘೈ ನಗರಕ್ಕೆ ಲಾಕ್ಡೌನ್ ವಿಧಿಸಿ ಚೀನಾ ಸರ್ಕಾರ ಆದೇಶ ಹೊರಡಿಸಿದೆ.ಶಾಂಘೈ ನಗರದಲ್ಲಿ ಭಾನುವಾರ ಒಂದೇ ದಿನ 3,450 ಮಂದಿಯಲ್ಲಿ ಲಕ್ಷಣ ರಹಿತ ಕೊರೊನಾ ಸೋಂಕು ಪತ್ತೆಯಾಗಿದೆ. ಇದು ಚೀನಾದ ಒಟ್ಟು ಪ್ರಕರಣಗಳ ಶೇ.70 ರಷ್ಟಿದೆ. ಅಲ್ಲದೆ 50 ಮಂದಿಯಲ್ಲಿ ಲಕ್ಷಣ ಸಹಿತ ಪ್ರಕರಣಗಳು ವರದಿಯಾಗಿರುವುದು ಕಂಡುಬಂದಿದೆ.ಈ ಹಿನ್ನೆಲೆಯಲ್ಲಿ ಶಾಂಘೈನಲ್ಲಿ ಲಾಕ್ಡೌನ್ ಘೋಷಿಸಲಾಗಿದೆ. ಶಾಂಘೈನ ಪುಡಾಂಗ್ ಜಿಲ್ಲೆ ಸೇರಿದಂತೆ