ಮೈಸೂರು ಅರಮನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಭೇಟಿ ನೀಡಿದ್ದಾರೆ. ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್, ಯದುವೀರ್ ಒಡೆಯರ್ ಜೊತೆ ಮಾತುಕತೆ ನಡೆಸಿದ್ದಾರೆ. ಮೈಸೂರು ಅರಮನೆಯ ಖಾಸಗಿ ನಿವಾಸದಲ್ಲಿ ಈ ಮಾತುಕತೆ ನಡೆದಿದೆ. 10 ಮಂದಿ ಬಿಜೆಪಿ ನಾಯಕರೊಂದಿಗೆ ಅರಮನೆಗೆ ಅಮೀತ್ ಷಾ ಭೇಟಿ ನೀಡಿರುವುದು ಚುನಾವಣಾ ಸಂದರ್ಭದಲ್ಲಿ ಮಹತ್ವ ಪಡೆದುಕೊಂಡಿದೆ. ಈಗಾಗಲೇ ರಾಜಕೀಯಕ್ಕೆ ಬರುವುದಿಲ್ಲ ಎಂದು ಯದುವೀರ್ ಒಡೆಯರ್ ಹೇಳಿದ್ದಾರೆ. ಅದರ ನಡುವೆಯೇ ಬಿಜೆಪಿ ಪರ ಪ್ರಚಾರಕ್ಕೆ