ಬೆಂಗಳೂರು: ವ್ಯಾಟ್ಸಪ್ ಕರೆಗಳ ಮೂಲಕ ಈಗಲೂ ಬಿಜೆಪಿ ನಾಯಕರು ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಪ್ರಯತ್ನ ನಡೆಸುತ್ತಿದ್ದಾರೆ ಎಂದು ಕರ್ನಾಟಕ ಕಾಂಗ್ರೆಸ್ ಆರೋಪಿಸಿದೆ.ಫೋನ್ ಕರೆಗಳು ರೆಕಾರ್ಡ್ ಆಗದಂತೇ ತಡೆಯಲು ಬಿಜೆಪಿ ನಾಯಕರು ವ್ಯಾಟ್ಸಪ್ ಕರೆ ಮಾಡುತ್ತಿದ್ದಾರೆ. ಆ ಮೂಲಕ ತಾವು ಸಂಪರ್ಕಿಸುವುದಕ್ಕೆ ಯಾವುದೇ ಪುರಾವೆ ಸಿಗದಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.ಸ್ವತಃ ಯಡಿಯೂರಪ್ಪನವರೇ ಕೆಲವು ಕಾಂಗ್ರೆಸ್ ಶಾಸಕರ ಜತೆ ವ್ಯಾಟ್ಸಪ್ ಕರೆ ಮೂಲಕ ಮಾತನಾಡಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ