ತನ್ನ ಬಗ್ಗೆ ಆಕ್ಷೇಪಾರ್ಹ ಮಾತನಾಡಿದ ಪ್ರಧಾನಿ ಮೋದಿ ಬಗ್ಗೆ ಸಂಸದ ಬಿಕೆ ಹರಿಪ್ರಸಾದ್ ಟ್ವೀಟ್

ನವದೆಹಲಿ, ಶನಿವಾರ, 11 ಆಗಸ್ಟ್ 2018 (11:24 IST)

ನವದೆಹಲಿ: ರಾಜ್ಯಸಭೆ ಉಪಸಭಾಪತಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತ ಬಳಿಕ ಸಂಸತ್ತಿನಲ್ಲಿ ತನ್ನ ಬಗ್ಗೆ ಪ್ರಧಾನಿ ಮೋದಿ ಆಡಿದ ಆಕ್ಷೇಪಾರ್ಹ ಮಾತಿನ ಬಗ್ಗೆ ಕಾಂಗ್ರೆಸ್ ಸಂಸದ ಬಿಕೆ ಹರಿಪ್ರಸಾದ್ ಟ್ವಿಟರ್ ನಲ್ಲಿ ವ್ಯಂಗ್ಯವಾಡಿದ್ದಾರೆ.
 

ಪ್ರಧಾನಿ ಆಡಿದ್ದ ಮಾತುಗಳನ್ನು ವಿಪಕ್ಷಗಳ ತೀವ್ರ ವಿರೋಧದ ಹಿನ್ನಲೆಯಲ್ಲಿ ಸ್ಪೀಕರ್ ಕಡತದಿಂದ ಹೊರ ಹಾಕಿದ್ದರು. ಈ ರೀತಿ ಪ್ರಧಾನಿ ಆಡಿದ ಮಾತುಗಳನ್ನು ಕಡತದಿಂದ ಹೊರಹಾಕಿದ ಪ್ರಕರಣ ತೀರಾ ಅಪರೂಪ.
 
ಈ ಬಗ್ಗೆ ಟ್ವೀಟ್ ಮಾಡಿರುವ ಬಿಕೆ ಹರಿಪ್ರಸಾದ್ ‘ಪಿಎಂ ಎಂದರೆ ಈ ಶ್ರೇಷ್ಠ ದೇಶದ ಪ್ರಧಾನಿ ಎಂದು ಸೂಚಿಸುತ್ತದೆ. ಅಷ್ಟೇ ಅಲ್ಲ, ಒಬ್ಬ ರಾಜಕೀಯ ನಾಯಕ ತನ್ನ ರಾಜಕೀಯ ಶುರು ಮಾಡುವ ಪಂಚಾಯ್ ಮೆಂಬರ್ ಎನ್ನುವುದಕ್ಕೂ ಪಿಎಂ ಅಂತಾರೆ. ಆದರೆ ಪ್ರಧಾನಿ ಬಳಸಿದ ಪದಗಳನ್ನು ನೋಡಿದರೆ ಒಬ್ಬ ಪಂಚಾಯತ್ ಮೆಂಬರ್ ಕೂಡಾ ನಾಚಿಕೆ ಪಡುತ್ತಾನೆ’ ಎಂದು ಟ್ವೀಟ್ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ನೆರೆಮನೆಯವನಿಂದ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ; ಮಗುವಿಗೆ ಜನ್ಮ ನೀಡಿದ ಬಾಲಕಿ

ಬಿಹಾರ : ಅತ್ಯಾಚಾರಕ್ಕೊಳಗಾದ 16 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ಮಗುವಿಗೆ ಜನ್ಮ ನೀಡಿದ ಘಟನೆ ...

news

ಹಿಂದೂ ಪತ್ನಿಯ ಕೊನೆ ಆಸೆ ಈಡೇರಿಸಲು ಮುಂದಾದ ಮುಸ್ಲಿಂ ಪತಿ

ಬೆಂಗಳೂರು: ಪತಿಯ ಆಸೆಯನ್ನು ಈಡೇರಿಸಲು ಪತ್ನಿ ಎಂತಹ ಸಾಹಸ ಕೆಲಸಕ್ಕೆ ಕೈ ಹಾಕುತ್ತಾರೆ ಎಂಬುದನ್ನು ನಾವು ...

news

'ನನಗೊಂದು ಪ್ರೇಯಸಿ ಹುಡುಕಿಕೊಡಿ' ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ ಈ ಆಟಗಾರ

ಇಂಗ್ಲೆಂಡ್ : ಫುಟ್ಬಾಲ್ ಲೆಜೆಂಡ್ ಪಾಲ್ ಗ್ಯಾಸ್ಕೋಯ್ನ್(51) ಇತ್ತೀಚಿಗಷ್ಟೇ ತಮ್ಮ ಇನ್ಸ್ಟ್ರಾಗ್ರಾಮ್ ...

news

18 ವರ್ಷಗಳ ಕಾಲ ಹುಡುಗಿಯನ್ನು ಬಂಧಿಸಿಟ್ಟುಕೊಂಡ ನಿರಂತರವಾಗಿ ಅತ್ಯಾಚಾರ ಎಸಗಿದ ಈ ವೈದ್ಯ

ಇಂಡೋನೇಷ್ಯಾ : ಜೀವ ಉಳಿಸುವ ವೈದ್ಯ ದೇವರ ಸ್ವರೂಪವೆಂದು ಹೇಳುತ್ತಾರೆ. ಆದರೆ ಈ ದೇವರ ರೂಪದ ವೈದ್ಯನೇ ...