ನವದೆಹಲಿ : ಕೊರೋನಾ ಲಸಿಕೆಯ ಎರಡನೇ ಡೋಸ್ ಮತ್ತು ಮುಂಜಾಗ್ರತಾ ಡೋಸ್ ನಡುವಿನ ಅಂತರವನ್ನು ಸರ್ಕಾರ ಶೀಘ್ರವೇ 6 ತಿಂಗಳಿಗೆ ಇಳಿಸುವ ಸಾಧ್ಯತೆ ಇದೆ ಎಂದು ಅಧಿಕೃತ ಮೂಲಗಳು ಬುಧವಾರ ತಿಳಿಸಿವೆ. ಸದ್ಯ ಈ ಡೋಸ್ಗಳ ನಡುವೆ 9 ತಿಂಗಳ ಅಂತರ ಇದೆ. ಲಸಿಕೆ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು ಏ.29ರಂದು ನಿಗದಿಯಾಗಿರುವ ಸಭೆಯಲ್ಲಿ ಲಸಿಕೆ ನಡುವಿನ ಅಂತರವನ್ನು ತಗ್ಗಿಸುವ ಬಗ್ಗೆ ಶಿಫಾರಸು ಮಾಡಲಿದೆ ಎಂದು ತಿಳಿಸಿದ್ದಾರೆ.2