ಬೆಂಗಳೂರು: ಬಜೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಸಮ್ಮಿಶ್ರ ಸರ್ಕಾರದ ಶಾಸಕರಲ್ಲಿ ಉಂಟಾಗಿರುವ ಅಸಮಾಧಾನದ ಲಾಭವೆತ್ತಲು ಮುಂದಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಓಪನ್ ಆಫರ್ ನೀಡಿದ್ದಾರೆ.ಬಿಜೆಪಿ ಪಕ್ಷ ಬಲವರ್ಧನೆ ಮಾಡಲು ಬಯಸಿ ಜೆಡಿಎಸ್-ಕಾಂಗ್ರೆಸ್ ಶಾಸಕರು ಬರಲು ಸಿದ್ಧವಾದರೆ ಅವರಿಗೆ ಸ್ವಾಗತ ಎಂದು ಬಿಎಸ್ ವೈ ಬೆಂಗಳೂರಿನಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿಯಲ್ಲಿ ಆಹ್ವಾನವಿತ್ತಿದ್ದಾರೆ.ಕಾಂಗ್ರೆಸ್-ಜೆಡಿಎಸ್ ನ ಕೆಲವು ಶಾಸಕರು ಬಿಜೆಪಿಗೆ ಬರಲು ಸಿದ್ಧರಿದ್ದಾರೆ. ಪಕ್ಷದ ಬಲವರ್ಧನೆ ಮಾಡಲು ಮನಸ್ಸಿರುವ ಶಾಸಕರು ಬರಬಹುದು ಎಂದು ಬಿಎಸ್