ಬೆಂಗಳೂರು: ತಮಿಳುನಾಡು ಮಾಜಿ ಸಿಎಂ ಎಂ ಕರುಣಾನಿಧಿ ವಿಧಿವಶರಾದ ಬೆನ್ನಲ್ಲೇ ಅವರ ಜತೆಗಿನ ಬಾಂಧವ್ಯವೊಂದನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮೆಲುಕು ಹಾಕಿದ್ದಾರೆ. ಕರುಣಾನಿಧಿ ಸಾವಿಗೆ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದ ಯಡಿಯೂರಪ್ಪ ಅವರ ಜತೆ ತಾವು ಮಾಡಿದ ಕೆಲಸವೊಂದನ್ನು ಸ್ಮರಿಸಿಕೊಂಡಿದ್ದಾರೆ.ತಮಿಳಿನ ಶ್ರೇಷ್ಠ ಕವಿ ತಿರುವಳ್ಳುವರ್ ಪ್ರತಿಮೆಯನ್ನು ಕರ್ನಾಟಕದಲ್ಲಿ ಮತ್ತು ತಮಿಳುನಾಡಿನಲ್ಲಿ ಸರ್ವಜ್ಞರ ಪ್ರತಿಮೆಯನ್ನು ಸ್ಥಾಪಿಸುವ ಮೂಲಕ ತಾವಿಬ್ಬರೂ ಉಭಯ ರಾಜ್ಯಗಳ ನಡುವೆ ಹೊಸದೊಂದು ಬಾಂಧವ್ಯಕ್ಕೆ ನಾಂದಿ ಹಾಡಿದ್ದೆವು.