ಸಿನಿಮಾ ರಂಗಕ್ಕೂ ಬಂಪರ್ ಕೊಡುಗೆ ನೀಡಿದ್ದಾರೆ. ಪ್ರಸ್ತುತ ವಾರ್ಷಿಕ 125 ಚಿತ್ರಗಳಿಗೆ ಕೊಡುತ್ತಿದ್ದ ಸಬ್ಸಿಡಿಯನ್ನು 200ಕ್ಕೆ ಏರಿಸಿದ್ದಾರೆ. ನೆನ್ನೆ ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಈ ಕುರಿತು ನಿರ್ಮಾಪಕ ಮತ್ತು ಸಚಿವ ಮುನಿರತ್ನ ಸುಳಿವು ನೀಡಿದ್ದರು. ಸಿನಿಮಾ ರಂಗ ಎಂದೂ ಮರೆಯಲಾರದಂತಹ ಸುದ್ದಿಯನ್ನು ಮುಖ್ಯಮಂತ್ರಿಗಳು ಕೊಡಲಿದ್ದಾರೆ ಎಂದು ವೇದಿಕೆಯಲ್ಲೇ ಮಾತನಾಡಿದ್ದರು.175 ಚಿತ್ರಗಳಿಗೆ ವಾರ್ಷಿಕ ಸಬ್ಸಿಡಿ ಕೊಡಿ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದರು. ಸರಕಾರ ಇನ್ನೂ 25 ಚಿತ್ರಗಳನ್ನು ಸೇರಿಸಿ