ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ಅತಿ ಹೆಚ್ಚು ಟೊಮೇಟೊ ಬೆಳೆಯುವ ಜಿಲ್ಲೆಗಳೆಂಬ ಖ್ಯಾತಿಯಿರುವ ಕೋಲಾರ, ಚಿಕ್ಕಬಳ್ಳಾಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೇಟೊಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಆದರೆ ಬೇಡಿಕೆಗೆ ತಕ್ಕಂತೆ ಫಸಲು ಪೂರೈಕೆಯಿಲ್ಲದ ಕಾರಣ ಕೋಲಾರದಲ್ಲಿ 14 ಕೆಜಿಯ ಒಂದು ಕ್ರೇಟ್ ಬೆಲೆ 1,000-1,300 ರೂ. ತನಕ ಮಾರಾಟವಾಗುವ ಮೂಲಕ ದಾಖಲೆ ಬರೆಯುತ್ತಿದೆ. ಚಿಕ್ಕಬಳ್ಳಾಪುರ ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಗುಣಮಟ್ಟ ಆಧರಿಸಿ 800-1,000 ರೂ.ವರೆಗೆ ಕ್ರೇಟ್ ಟೊಮೇಟೊ ಮಾರಾಟವಾಗುತ್ತಿದೆ. ಅತಿವೃಷ್ಟಿಗೆ ಮುನ್ನ