ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದ ಸಂಪುಟ ವಿಸ್ತರಣೆಗೆ ಕಾಂಗ್ರೆಸ್-ಜೆಡಿಎಸ್ ನಾಯಕರು ಎದುರು ನೋಡುತ್ತಿದ್ದರೆ, ಪಿತೃಪಕ್ಷದ ಕಾಟ ಶುರುವಾಗಿದೆ!ಸೆಪ್ಟೆಂಬರ್ ಮೊದಲ ವಾರದಲ್ಲೇ ಸಂಪುಟ ವಿಸ್ತರಣೆ ನಡೆಸುವುದೆಂದು ಈ ಮೊದಲು ಕಾಂಗ್ರೆಸ್ ಮತ್ತು ಜೆಡಿಎಸ್ ನಿರ್ಧಾರ ಮಾಡಿಕೊಂಡಿದ್ದರು. ಆದರೆ ಇದೀಗ ಜಾರಕಿಹೊಳಿ ಸಹೋದರರ ಬಂಡಾಯದ ನಂತರ ದಿಡೀರ್ ಆಗಿ ಸಂಪುಟ ವಿಸ್ತರಣೆ ಮಾಡಿದರೆ ಬಂಡಾಯ ಬಿಸಿ ಹೆಚ್ಚಾಗಬಹುದು ಎಂಬ ಭಯ ಉಭಯ ಪಕ್ಷಗಳ ಹೈಕಮಾಂಡ್ ಗಿದೆ.ಹೀಗಾಗಿ ಸಂಪುಟ ವಿಸ್ತರಣೆ ಮುಂದೂಡಲು ನಾಯಕರು ಚಿಂತನೆ