ನವದೆಹಲಿ : ಅಂಗಡಿಗಳಲ್ಲಿ ಸೇವೆಗಳನ್ನು ಒದಗಿಸುವ ಸಲುವಾಗಿ ಗ್ರಾಹಕರ ವೈಯಕ್ತಿಕ ಸಂಪರ್ಕ ವಿವರಗಳನ್ನು ಕೊಡಲು ಒತ್ತಾಯಿಸದಂತೆ ಗ್ರಾಹಕರ ವ್ಯವಹಾರಗಳ ಸಚಿವಾಲಯವು ಚಿಲ್ಲರೆ ವ್ಯಾಪಾರಿಗಳಿಗೆ ಸೂಚನೆ ನೀಡಿದೆ ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ. ಯಾವುದೇ ಅಂಗಡಿಗಳಿಗೆ ಹೋದರೂ ಬಿಲ್ ಕೊಡುವ ಮೊದಲು ಮೊಬೈಲ್ ನಂಬರ್ ಕೊಡುವಂತೆ ಕೇಳುತ್ತಾರೆ. ಗ್ರಾಹಕರು ತಮ್ಮ ವೈಯಕ್ತಿಕ ನಂಬರ್ ಕೊಡಲು ಒಪ್ಪದಿದ್ದಾಗ ಅವರಿಗೆ ಸೇವೆಗಳನ್ನು ಒದಗಿಸಲಿಲ್ಲ ಎಂದು ಹಲವು