ಬೆಳಗಾವಿ: ಕಾಂಗ್ರೆಸ್ ನ ಲಕ್ಷ್ಮೀ ಹೆಬ್ಬಾಳ್ಕರ್ ಭಾಷಣಕ್ಕೆ ತಿರುಗೇಟು ಕೊಡುವ ಸಲುವಾಗಿ ಮಾತನಾಡುವಾಗ ವಿವಾದಾತ್ಮಕ ಹೇಳಿಕೆ ನೀಡಿದ್ದ ಬೆಳಗಾವಿ ಗ್ರಾಮಾಂತರ ಶಾಸಕ ಸಂಜಯ್ ಪಾಟೀಲ್ ವಿರುದ್ಧ ಪ್ರಕರಣ ದಾಖಲಾಗಿದೆ.ಈ ಚುನಾವಣೆ ನೀರು, ಗಡಿ ಸಮಸ್ಯೆಯ ವಿಚಾರವಾಗಿ ಅಲ್ಲ. ಇದು ಹಿಂದೂ ಮುಸ್ಲಿಂ ನಡುವಿನ ಹೋರಾಟದ ಚುನಾವಣೆ ಎಂದು ಸಂಜಯ್ ಪಾಟೀಲ್ ವಿವಾದಾತ್ಮಕವಾಗಿ ಮಾತನಾಡಿದ್ದರು.ಈ ಮೂಲಕ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಮಾತನಾಡಿದ್ದಾರೆ ಎಂದು ಸಂಜಯ್ ಪಾಟೀಲ್ ವಿರುದ್ಧ ದೂರು ದಾಖಲಿಸಲಾಗಿದೆ.ತಾಜಾ