ಬೆಂಗಳೂರು : ರಾಜ್ಯದಲ್ಲಿ ಅಕಾಲಿಕ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ಥವಾಗಿದೆ. ಒಂದು ಕಡೆ ಸಂಚಾರಕ್ಕೆ ತೊಂದರೆಯಾದರೆ ಇನ್ನೊಂದು ಕಡೆ ಕಟಾವಿಗೆ ಸಿದ್ಧವಾದ ಬೆಳೆಗಳು ನೀರು ಪಾಲಾಗಿದೆ.ಅದರಲ್ಲೂ ಬೆಳೆಯನ್ನೇ ನಂಬಿಕೊಂಡು ಜೀವನ ನಡೆಸುವ ರೈತರ ಸ್ಥಿತಿ ಹೇಳತೀರದು. ಗದ್ದೆಗಳಲ್ಲಿ, ತೋಟಗಳಲ್ಲಿ ನೀರು ತುಂಬಿಕೊಂಡಿದ್ದು, ರೈತರು ಆತಂಕದಲ್ಲೇ ಜೀವನ ಸಾಗಿಸುವಂತಾಗಿದೆ. ಹೀಗಿರುವಾಗಲೇ ತರಕಾರಿಗಳ ಬೆಲೆ ಏರಿಕೆಯಾಗಿದೆ. ಇದಕ್ಕೆ ಕಾರಣ ಫಸಲು ಸರಿಯಾಗಿ ಮಾರುಕಟ್ಟೆ ಸೇರದಿರುವುದು. ಅದರಲ್ಲೂ ಈ ಹಿಂದೆ ರಸ್ತೆಗೆ ಟೊಮೆಟೋಗಳನ್ನು ಸುರಿದು ಪ್ರತಿಭಟನೆ