ಬೆಂಗಳೂರು(ಸೆ.20) : 2021-22ನೇ ಸಾಲಿನ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶವು ಇಂದು (ಸೆಪ್ಟೆಂಬರ್ 20) ಪ್ರಕಟವಾಗಲಿದೆ. ಹಾಗೆಯೇ ಕೌನ್ಸೆಲಿಂಗ್ ಪ್ರಕ್ರಿಯೆಯು ಅಕ್ಟೋಬರ್ನಿಂದ ಪ್ರಾರಂಭವಾಗಲಿದೆ. ಈ ವರ್ಷ ಒಟ್ಟು 2,01,834 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿ ಮಾಡಿಕೊಂಡಿದ್ದರು. 1.89 ಲಕ್ಷ ವಿದ್ಯಾರ್ಥಿಗಳು ಗಣಿತ ಪರೀಕ್ಷೆ ಬರೆದಿದ್ದು, ಶೇ.92.90% ಹಾಜರಾತಿ ದಾಖಲಾಗಿದೆ. ಅದೇ ರೀತಿ 1.62 ಲಕ್ಷ ವಿದ್ಯಾರ್ಥಿಗಳು ಜೀವಶಾಸ್ತ್ರ ಪರೀಕ್ಷೆ ಬರೆದಿದ್ದು ಶೇ.80.48% ಹಾಜರಾತಿ ದಾಖಲಾಗಿದೆ. 1.93 ಲಕ್ಷ ವಿದ್ಯಾರ್ಥಿಗಳು ರಸಾಯನಶಾಸ್ತ್ರ