ಬೆಂಗಳೂರು : ಚಂದ್ರಯಾನ-3 ಕ್ಕೆ ಸಂಬಂಧಿಸಿದಂತೆ ಇಂದು (ಗುರುವಾರ) ಮಧ್ಯಾಹ್ನ ಒಂದು ಗಂಟೆಗೆ ಮಹತ್ವದ ಬೆಳವಣಿಗೆ ನಡೆಯಲಿದೆ ಎಂದು ನೆಹರು ತಾರಾಲಯದ ವಿಜ್ಞಾನಿ ಆನಂದ್ ಹೇಳಿದ್ದಾರೆ. ಇಂದು ಮಧ್ಯಾಹ್ನ 1 ಗಂಟೆಗೆ ಚಂದ್ರಯಾನ-3ರ ಮಹತ್ತರ ಬೆಳವಣಿಗೆ ನಡೆಯಲಿದೆ. ಚಂದ್ರಯಾನ-3 ನೌಕೆ ಅಂತಿಮ ಕಕ್ಷೆಗೆ ಯಶಸ್ವಿಯಾಗಿ ಪ್ರವೇಶಿಸಿದೆ. ಉಡಾವಣಾ ವಾಹನದಲ್ಲಿರುವ ಲ್ಯಾಂಡರ್ ಮಾಡ್ಯೂಲ್ ಇಂದು ಮಧ್ಯಾಹ್ನ 1 ಗಂಟೆಗೆ ನೌಕೆಯಿಂದ ಬೇರ್ಪಡುವ ಕಾರ್ಯ ನಡೆಯಲಿದೆ ಎಂದರು.ಚಂದ್ರಯಾನ-3 ಮಿಷನ್ನ ರಾಕೆಟ್ ಜುಲೈ 14ರಂದು