ಬೆಂಗಳೂರು: ಮಂಗಳೂರು-ಬೆಂಗಳೂರು ನಡುವೆ ಪ್ರಮುಖ ಸಂಪರ್ಕ ಮಾರ್ಗವಾದ ಚಾರ್ಮಾಡಿ ಘಾಟ್ ನಲ್ಲಿ ಮಳೆಯಿಂದಾಗಿ ಮರ, ಮಣ್ಣು ರಸ್ತೆಗೆ ಬಿದ್ದು ಮಾರ್ಗ ಬಂದ್ ಆಗಿದೆ. ಇದರಿಂದಾಗಿ ವಾಹನ ಸಂಚಾರದಲ್ಲಿ ವ್ಯತ್ಯಯವಾಗಿದೆ.ಹಲವಾರು ಬಸ್, ಕಾರು ಇತ್ಯಾದಿ ವಾಹನಗಳು ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜ್ಯಾಮ್ ನಲ್ಲಿ ಸಿಕ್ಕಿ ಹಾಕಿಕೊಂಡಿದ್ದು, ಪ್ರಯಾಣಿಕರು ಸರಿಯಾಗಿ ನೀರು, ಆಹಾರವಿಲ್ಲದೇ ನಿನ್ನೆ ಸಂಜೆಯಿಂದ ಕಾಡಿನ ಮಧ್ಯೆ ಪರದಾಡುತ್ತಿದ್ದಾರೆ.ಈ ಭಾಗದಲ್ಲಿ ಮೊಬೈಲ್ ನೆಟ್ ವರ್ಕ್ ಕೂಡಾ ಸರಿಯಾಗಿ ಸಿಗುವುದಿಲ್ಲ. ಅಂಗಡಿಗಳು, ಮನೆಗಳೂ