ಹೊಸದಿಲ್ಲಿ: ಕೊರೊನಾ 3ನೇ ಅಲೆಯಿಂದ ಮಕ್ಕಳನ್ನು ರಕ್ಷಿಸಲು ಕೇಂದ್ರ ಸರಕಾರ ಸಮರೋಪಾದಿಯಲ್ಲಿ ಸಿದ್ಧತೆ ನಡೆಸುತ್ತಿದೆ. 12 ವರ್ಷ ಮೇಲ್ಪಟ್ಟ ಮಕ್ಕಳಿಗಾಗಿ 3 ಡೋಸ್ಗಳ ಝೈಕೋವ್-ಡಿ ಲಸಿಕೆಯನ್ನು ಶನಿವಾರ ಸರಕಾರ ಬಿಡುಗಡೆಗೊಳಿಸಲಿದೆ ಎನ್ನಲಾಗಿದೆ. Photo Courtesy: Google 12 ವರ್ಷ ಮೇಲ್ಪಟ್ಟ ಮಕ್ಕಳಿಗಾಗಿ ಝೈಕೋವ್-ಡಿ ಲಸಿಕೆ ಅಭಿವೃದ್ಧಿಪಡಿ ಸಲಾಗಿದೆ. ಇದು ಭಾರತದಲ್ಲಿ ಅನುಮತಿ ಪಡೆದ ಮೊದಲ ಮಕ್ಕಳ ಲಸಿಕೆ’. ಇದು 3 ಡೋಸ್ಗಳ ಲಸಿಕೆಯಾಗಿದ್ದು, ಇದನ್ನು ನೀಡಲು ಸೂಜಿಯ ಆವಶ್ಯಕತೆ ಇರುವುದಿಲ್ಲ.