ನವದೆಹಲಿ: ದೇಶದ ಸ್ವಾತಂತ್ರ್ಯೋತ್ಸವದ ಅಂಗವಾಗಿ ದೆಹಲಿಯ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿಗೆ ಮಕ್ಕಳ ಪ್ರೀತಿಯ ಅಪ್ಪುಗೆ ದೊರೆಯಿತು. ಭಾಷಣ ಮುಗಿಸಿ ಮರಳುವ ಮೊದಲು ನೇರವಾಗಿ ತ್ರಿವರ್ಣ ಧ್ವಜದ ವೇಷ ಧರಿಸಿ ಶಿಸ್ತಾಗಿ ನಿಂತಿದ್ದ ಮಕ್ಕಳ ಗುಂಪಿನ ಕಡೆಗೆ ಧಾವಿಸಿದ ಪ್ರಧಾನಿ ಮೋದಿಯನ್ನು ತಬ್ಬಿಕೊಳ್ಳಲು, ಕೈ ಕುಲುಕಲು ಮಕ್ಕಳು ಮುಗಿ ಬಿದ್ದರು. ಅರೆಕ್ಷಣ ಪ್ರಧಾನಿ ಮೋದಿ ಮಕ್ಕಳ ನೂಕು ನುಗ್ಗಲು ನಡುವೆ ತಡಬಡಾಯಿಸುವಂತಾಯಿತು. ಭದ್ರತಾ ಸಿಬ್ಬಂದಿಗೂ