60 ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಚೀನಾದ ಜನಸಂಖ್ಯೆಯಲ್ಲಿ ಗಮನಾರ್ಹ ಪ್ರಮಾಣದಲ್ಲಿ ಇಳಿಕೆ ಆಗಿದೆ. ಈ ಬೆಳವಣಿಗೆ ನಾನಾ ನೆಲೆಗಟ್ಟಿನಲ್ಲಿ ಚರ್ಚೆಗೆ ಗ್ರಾಸವಾಗಿದೆ. ಮುಂದೆ ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ರಾಷ್ಟ್ರ ಯಾವುದು ಆಗಲಿದೆ ಎಂಬ ಪ್ರಶ್ನೆ ಮೂಡಿದ್ದು, ವಿಶ್ಲೇಷಣೆಗಳ ಪ್ರಕಾರ ಆ ಸ್ಥಾನವನ್ನು ಭಾರತ ಅಲಂಕರಿಸಲಿದೆ. ಈಗ ಇಡೀ ಜಗತ್ತಿನ ಕಣ್ಣು ಭಾರತದ ಮೇಲೆ ನೆಟ್ಟಿದೆ.ಕಳೆದ ವರ್ಷ ಚೀನಾ ಜನಸಂಖ್ಯೆಯಲ್ಲಿ ಸುಮಾರು 8,50,000 ಇಳಿಕೆಯಾಗಿದೆ. ಆರು