ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದ್ದಂತೆ ಒಂದೊಂದೆ ರಾಜ್ಯಗಳು ಶಾಲೆಗಳನ್ನು ಪುನರಾರಂಭ ಮಾಡುತ್ತಿವೆ. ಹಿಮಾಚಲ ಪ್ರದೇಶ ರಾಜ್ಯವು ಸಹ ಇಂದಿನಿಂದ ಶಾಲೆಗಳನ್ನು ಆರಂಭಿಸಿದೆ. 3 ರಿಂದ 7ನೇ ಕ್ಲಾಸ್ಗಳಿಗೆ ಇಂದಿನಿಂದ ತರಗತಿಗಳು ಆರಂಭವಾಗಿವೆ. ಇನ್ನು 1 ಮತ್ತು 2ನೇ ತರಗತಿಗಳಿಗೆ ನವೆಂಬರ್ 15ರಿಂದ ತರಗತಿಗಳನ್ನು ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈಗಾಗಲೇ 7 ನೇ ತರಗತಿ ಮೇಲ್ಪಟ್ಟ ತರಗತಿಗಳಿಗೆ ಕ್ಲಾಸ್ ನಡೆಸಲಾಗುತ್ತಿದೆ. ಸದ್ಯ ಕೊರೊನಾ ಮಾರ್ಗಸೂಚಿಗಳನ್ನು ಪಾಲನೆ ಮಾಡಿಕೊಂಡು ತರಗತಿಗಳನ್ನು