ಪಾಪ ಮಾಜಿ ಪ್ರಧಾನಿ ಮನೋಹನ್ ಸಿಂಗ್ ಮಾತನಾಡುತ್ತಿರಲಿಲ್ಲ ಆದರೆ ಕೆಲಸ ಮಾಡುತ್ತಿದ್ದರು. ಈ ಮುಂಡೇದು ಬರಿ ಮಾತನಾಡುತ್ತಿದೆ ಹೊರತು ಕೆಲಸ ಮಾಡುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಗೆ ಸಿ.ಎಂ.ಇಬ್ರಾಹಿಂ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಭಾಷಣದಲ್ಲಿ ಕೇವಲ ಖಾಲಿ ದಿನ್, ಪರಿವರ್ತನ್ ಆಯೆಗೆ, ಅಚ್ಛೇ ದಿನ್ ಆಯೆಗೆ ಅಂತ ಹೇಳೋದೇ ಆಯ್ತು. ಆದರೇ ಅಚ್ಛೇ ದಿನ್ ಅರ್ಥವೇ ಬದಲಾಗಿದೆ. ತರಕಾರಿ ಮಾರುವ ಗಂಗಮ್ಮಗೆ ಡೆಬಿಟ್ ಕ್ರೆಡಿಟ್ ಕಾರ್ಡ್ ಕೊಟ್ರೆ ಎಲ್ಲಿ ಇಡಬೇಕು?