ಬೆಂಗಳೂರು: ತಾನು ಆರೂವರೆ ಕೋಟಿ ಜನರು ಆರಿಸಿದ ಮುಖ್ಯಮಂತ್ರಿ ಅಲ್ಲ ಎಂದು ಮತ್ತೊಮ್ಮೆ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.ಮುಖ್ಯಮಂತ್ರಿ ಆದ ಸಂದರ್ಭದಲ್ಲಿ ಇಂತಹ ಹೇಳಿಕೆ ನೀಡಿ ಸಿಎಂ ಕುಮಾರಸ್ವಾಮಿ ವಿವಾದಕ್ಕೆ ಸಿಲುಕಿದ್ದರು. ಇದೀಗ ಆ ಮಾತನ್ನು ಪುನರುಚ್ಚರಿಸಿದ್ದಾರೆ.ನಾನು ಆರೂವರೆ ಕೋಟಿ ಜನ ಆರಿಸಿದ ಸಿಎಂ ಅಲ್ಲ. ರಾಜಕೀಯದಲ್ಲಿ ಸಾಂದರ್ಭಿಕ ಶಿಶು. ಹಿಂದೆಯೂ ನಾನು ಸತ್ಯ ಹೇಳಿದ್ದೆ. ಆದರೆ ಅದಕ್ಕೆ ಬೇರೆಯದೇ ಅರ್ಥ ನೀಡಲಾಯಿತು. ಮುಖ್ಯಮಂತ್ರಿ ಆದಾಗಿನಿಂದಲೂ ನನಗೆ ಉಸಿರಾಡಲೂ ಸಮಯ