ಬೆಂಗಳೂರು: ಅದ್ಯಾಕೋ ಸಿಎಂ ಕುಮಾರಸ್ವಾಮಿ ಇತ್ತೀಚೆಗೆ ಕೊಡುವ ಒಂದೊಂದು ಹೇಳಿಕೆಯೂ ಅವರಿಗೆ ಉರುಳಾಗಿ ಪರಿಣಮಿಸುತ್ತಿದೆ. ಉತ್ತರ ಕರ್ನಾಟಕದ ಬಗ್ಗೆ ಅವರು ಈ ಮೊದಲು ನೀಡಿದ್ದ ಹೇಳಿಕೆ ಪ್ರತ್ಯೇಕ ರಾಜ್ಯ ಕೂಗು ಹೆಚ್ಚಾಗಲು ಕಾರಣವಾಗಿತ್ತು. ಇದೀಗ ಅದನ್ನು ತಣ್ಣಗಾಗಿಸಲು ಬೆಳಗಾವಿಯನ್ನು ಎರಡನೇ ರಾಜಧಾನಿಯಾಗಿಸೋಣ ಎಂಬ ಕುಮಾರಸ್ವಾಮಿ ಹೇಳಿಕೆ ಮತ್ತೆ ಅವರಿಗೆ ಸಂಕಷ್ಟ ತರುವ ಎಲ್ಲಾ ಸೂಚನೆ ಕಾಣುತ್ತಿದೆ.ಸಿಎಂ ಈ ಹೇಳಿಕೆ ನೀಡಿದ ಬೆನ್ನಲ್ಲೇ ಇದೀಗ ಬೆಳಗಾವಿ ಬೇಡ, ಕುಲಬರ್ಗಿಯನ್ನು ಎರಡನೇ