ಬೆಂಗಳೂರು: ವಿಧಾನಸೌಧದ ಸಭಾಂಗಣದಲ್ಲಿ ಸಿಎಂ ಕುಮಾರಸ್ವಾಮಿ ರೈತ ನಾಯಕರೊಂದಿಗೆ ಸಭೆ ನಡೆಸುತ್ತಿದ್ದು, ರೈತರ ಸಾಲಮನ್ನಾ ಕುರಿತು ಚರ್ಚೆ ನಡೆಸುತ್ತಿದ್ದಾರೆ.ಇದೇ ವೇಳೆ ನಾಳೆ ಮುಕ್ತಾಯಗೊಳ್ಳುತ್ತಿದ್ದ ಯಶಸ್ವಿನಿ ಯೋಜನೆ ಮುಂದುವರಿಸುವುದಾಗಿ ಸಿಎಂ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.ಈ ಸಂದರ್ಭದಲ್ಲಿ ರೈತ ನಾಯಕರಿಂದ ರೈತರ ಸಮಸ್ಯೆಗಳ ಕುರಿತು ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡಲಾಗಿದೆ. ಈ ಸಂದರ್ಭದಲ್ಲಿ ಜಿಲ್ಲಾವಾರು ರೈತ ನಾಯಕರು ತಮ್ಮ ಸಮಸ್ಯೆಗಳ ಕುರಿತು ಹೇಳಿಕೊಳ್ಳುತ್ತಿದ್ದಾರೆ ಮತ್ತು ರೈತರ ಸಾಲಮನ್ನಾ ಮಾಡುವ ಅಗತ್ಯದ ಬಗ್ಗೆ ಸಿಎಂಗೆ