ಬೆಂಗಳೂರು: ರೈತರ ಸಾಲಮನ್ನಾ ಕುರಿತು ರೈತ ನಾಯಕರೊಂದಿಗೆ ಸಂವಾದ ನಡೆಸುತ್ತಿರುವ ಸಿಎಂ ಕುಮಾರಸ್ವಾಮಿ ಸಭೆಯ ನಡುವೆ ರೈತ ನಾಯಕರ ಗದ್ದಲ ನೋಡಿ ತಾಳ್ಮೆ ಕಳೆದುಕೊಂಡ ಪ್ರಸಂಗ ನಡೆಯಿತು.ಉಪ ಮುಖ್ಯಮಂತ್ರಿ ಜಿ ಪರಮೇಶ್ವರ್ ಜತೆಗೆ ರೈತ ನಾಯಕರೊಂದಿಗೆ ಸಭೆ ನಡೆಸುತ್ತಿದ್ದ ಸಿಎಂ ಸಾಲಮನ್ನಾ ಕುರಿತು ರೈತರ ಸಲಹೆ ಕೇಳುತ್ತಿದ್ದಾರೆ. ಈ ಸಂದರ್ಭದಲ್ಲಿ ಅಂಕಿ ಅಂಶಗಳ ಕುರಿತು ರೈತ ನಾಯಕರಲ್ಲೇ ಗೊಂದಲ ಉಂಟಾಗಿ ಗದ್ದಲ ಉಂಟಾಯಿತು.ಯಾರೂ ಯಾರ ಮಾತೂ ಕೇಳದ ಪರಿಸ್ಥಿತಿಗೆ ತಲುಪಿದಾಗ