ಗುಟ್ಟು ಬಿಟ್ಟುಕೊಡಲ್ಲ ಎಂದ ಸಿಎಂ ಕುಮಾರಸ್ವಾಮಿ

ಬೆಂಗಳೂರು| Krishnaveni K| Last Modified ಮಂಗಳವಾರ, 3 ಜುಲೈ 2018 (08:59 IST)
ಬೆಂಗಳೂರು: ವಿಧಾನಸಭೆ ಕಲಾಪಗಳು ನಿನ್ನೆ ರಾಜ್ಯಪಾಲರ ಭಾಷಣದೊಂದಿಗೆ ಆರಂಭವಾಗಿದ್ದು, ಎಲ್ಲರೂ ಬಜೆಟ್ ಅವಧಿಗಾಗಿ ಎದುರು ನೋಡುತ್ತಿದ್ದಾರೆ.


ಆದರಲ್ಲೂ ವಿಶೇಷವಾಗಿ ಬಜೆಟ್ ನಲ್ಲಿ ಸಿಎಂ ಕುಮಾರಸ್ವಾಮಿ ರೈತರ ಸಾಲಮನ್ನಾ ಮಾಡುವ ಘೋಷಣೆ ಮಾಡುತ್ತಾರೆಯೇ ಎಂಬುದೇ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಆದರೆ ಈ ಬಗ್ಗೆ ಗುಟ್ಟು ಬಿಟ್ಟುಕೊಡಲು ಸಿಎಂ ನಿರಾಕರಿಸಿದ್ದಾರೆ.


‘ರೈತರ ಸಾಲಮನ್ನಾ ಮಾಡುವ ಬಗ್ಗೆ ಬಜೆಟ್ ನವರೆಗೂ ಕಾಯಿರಿ. ಬಜೆಟ್ ನಲ್ಲಿ ನಾನು ಏನು ಘೋಷಣೆ ಮಾಡುತ್ತೇನೆಂಬುದನ್ನು ಈಗಲೇ ಗುಟ್ಟು ಬಿಟ್ಟುಕೊಡಲ್ಲ’ ಎಂದು ಸಿಎಂ ಕುಮಾರಸ್ವಾಮಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಹಾಗಾಗಿ ಬಜೆಟ್ ನವರೆಗೂ ಸಾಲಮನ್ನಾ ಬಗ್ಗೆ ಎದುರು ನೋಡಲೇಬೇಕು.


ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.


ಇದರಲ್ಲಿ ಇನ್ನಷ್ಟು ಓದಿ :