ಬೆಂಗಳೂರು: ಅಂತೂ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ದೋಸ್ತಿ ಸರ್ಕಾರಕ್ಕೆ ಸದನದ ಒಪ್ಪಿಗೆ ಸಿಕ್ಕಿದೆ. ವಿಶ್ವಾಸ ಮತ ಪ್ರಕ್ರಿಯೆಯಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ಗೆಲುವಾಗಿದೆ.ಸ್ಪೀಕರ್ ಆಗಿ ಶಾಸಕ ರಮೇಶ್ ಕುಮಾರ್ ಅವಿರೋಧವಾಗಿ ಆಯ್ಕೆಯಾದರು. ಅದಾದ ಬಳಿಕ ನೂತನ ಸ್ಪೀಕರ್ ಗೆ ಅಭಿನಂದನಾ ಭಾಷಣಗಳನ್ನು ವಿವಿಧ ಪಕ್ಷದ ನಾಯಕರು ನಡೆಸಿದರು.ಸ್ಪೀಕರ್ ಕೆಲ ನಿಮಿಷ ಮಾತನಾಡಿದ ಬಳಿಕ ಸಿಎಂ ಕುಮಾರಸ್ವಾಮಿ ಪ್ರಸ್ತಾವನೆ ಸಲ್ಲಿಸಲು ಅವಕಾಶ ನೀಡಲಾಯಿತು. ಪ್ರಸ್ತಾವನೆ ನಂತರ ಚರ್ಚೆಗೆ ಅವಕಾಶ ನೀಡಲಾಯಿತು. ಈ ಸಂದರ್ಭದಲ್ಲಿ ಕುಮಾರಸ್ವಾಮಿ