ಬೆಂಗಳೂರು: ನಿಯಮ ಬಾಹಿರವಾಗಿ ತಮ್ಮ ಹತ್ತಿರದ ಸಂಬಂಧಿಗೆ ಬೆಂಗಳೂರು ನಗರ ಡಿಸಿ ಹುದ್ದೆ ನೀಡಿದ ಆರೋಪ ಸಿಎಂ ಸಿದ್ದರಾಮಯ್ಯ ಹೆಗಲಿಗೇರಿದೆ.ಬಿಜೆಪಿ ಎನ್. ಆರ್ ರಮೇಶ್ ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಹಿಂದಿನ ಡಿಸಿ ಶಂಕರ್ ಕೂಡಾ ಸಿದ್ದರಾಮಯ್ಯ ಸಂಬಂಧಿ. ಇದೀಗ ಅವರ ಸ್ಥಾನಕ್ಕೆ ಬಂದಿರುವ ದಯಾನಂದ್ ಕೂಡಾ ಸಿದ್ದರಾಮಯ್ಯನವರ ಸಂಬಂಧಿ ಎಂದು ರಮೇಶ್ ಆರೋಪಿಸಿದ್ದಾರೆ.ಬೆಂಗಳೂರು ನಗರ ಡಿಸಿ ಹುದ್ದೆ ನಿರ್ವಹಿಸಲು ಕನಿಷ್ಟ 4 ವರ್ಷಗಳ ಸೇವಾ ಹಿರಿತನವಿರಬೇಕು.